ಕೊರೋನಾ ದೇಣಿಗೆ ನೀಡಿ ಟ್ರೋಲ್ ಆದ ಯಜುವೇಂದ್ರ ಚಾಹಲ್

ಮುಂಬೈ| Krishnaveni K| Last Modified ಸೋಮವಾರ, 10 ಮೇ 2021 (10:46 IST)
ಮುಂಬೈ: ದೇಶದಲ್ಲಿ ಕೊರೋನಾ ಸ್ಥಿತಿ ವಿರುದ್ಧ ಹೋರಾಡಲು ಕ್ರಿಕೆಟಿಗರು ತಮ್ಮದೇ ರೀತಿಯಲ್ಲಿ ದೇಣಿಗೆ ನೀಡುವ ಮೂಲಕ ಸಹಾಯಮಾಡುತ್ತಿದ್ದಾರೆ. ಕ್ರಿಕೆಟಿಗ ಯಜುವೇಂದ್ರ ಚಾಹಲ್ ಕೂಡಾ ವಿರಾಟ್ ಕೊಹ್ಲಿ ದಂಪತಿ ಸ್ಥಾಪಿಸಿರುವ ದೇಣಿಗೆ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

 
ಆದರೆ ಇದೀಗ ಚಾಹಲ್ ದೇಣಿಗೆ ನೀಡಿ ಟ್ರೋಲ್ ಆಗಿದ್ದಾರೆ. ಕಾರಣ, ಎಲ್ಲಾ ಕ್ರಿಕೆಟಿಗರು ಲಕ್ಷಗಳಲ್ಲಿ, ಕೋಟಿಗಳಲ್ಲಿ ದೇಣಿಗೆ ನೀಡುತ್ತಿದ್ದರೆ, ಚಾಹಲ್ ಕೇವಲ 95 ಸಾವಿರ ರೂ. ನೀಡಿದ್ದಾರೆ.
 
ಇದನ್ನು ನೋಡಿದ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಕೋಟಿ ಸಂಪಾದಿಸುವ ಕ್ರಿಕೆಟಿಗ ಕೇವಲ 95 ಸಾವಿರ ರೂ. ನೀಡುತ್ತಿದ್ದಾರೆ. ಆದರೆ ಬಡವರೂ ತಮ್ಮ ದುಡಿಮೆಯನ್ನೆಲ್ಲಾ ಧಾರೆ ಎರೆಯುತ್ತಿದ್ದಾರೆ. ನೀವು ಕೊಟ್ಟ ದೇಣಿಗೆ ಹಣದಿಂದ ಒಂದು ವೆಂಟಿಲೇಡರ್ ಕೂಡಾ ಬರದು ಎಂದು ಟ್ರೋಲ್ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :