ಮುಂಬೈ : ಭಾರತ ತಂಡದ ಕ್ರಿಕೆಟ್ ಆಟಗಾರ ಆಶಿಶ್ ನೆಹ್ರಾ ಅವರ ಹಾಗೆ ಅಲ್ ರೌಂಡರ್ ಯುವರಾಜ್ ಸಿಂಗ್ ಅವರು ಕೂಡ ಅತ್ಯಂತ ಪ್ರಭಾವಿಯಾಗಿ ಪುನಃ ಆಗಮಿಸಲಿದ್ದಾರೆ ಎಂದು ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಹಾ ಹರಾಜಿನ ಬಗ್ಗೆ ಮಾತನಾಡುತ್ತಿರುವ ಸೆಹ್ವಾಗ್ ಅವರು ಕಿಂಗ್ಸ್ ಇಲೆವೆನ್ ತಂಡವು ಯುವರಾಜ್ ಸಿಂಗ್ ಹಾಗು ಹರಭಜನ್ ಸಿಂಗ್ ಅವರಂತಹ ಆಟಗಾರರನ್ನು ಬಯಸುತ್ತಿದೆ.