ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಹಿಂದೆ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡಾ ಇದೇ ಸಮಸ್ಯೆಯಿಂದ ಬಳಲಿದ್ದರು. ಆದರೆ ಅವರು ಕ್ಯಾನ್ಸರ್ ಗೆದ್ದು ಬಳಿಕ ಕ್ರಿಕೆಟ್ ಕಣಕ್ಕೆ ಮರಳಿದ್ದು ಈಗ ಇತಿಹಾಸ. 2011 ರ ವಿಶ್ವಕಪ್ ಸಂದರ್ಭದಲ್ಲಿ ಯುವಿಗೆ ಕ್ಯಾನ್ಸರ್ ಶುರುವಾಗಿತ್ತು. ಆಗ ಅನಾರೋಗ್ಯವಿದ್ದರೂ ಮುಚ್ಚಿಟ್ಟು ಅವರು ವಿಶ್ವಕಪ್ ಗೆಲುವಿನ ರೂವಾರಿಯಾದರು. ಆದರೆ ಆಗ ಅವರಿಗೆ ಮೊದಲ ಹಂತದಲ್ಲಿತ್ತಷ್ಟೇ.