ನವದೆಹಲಿ: ಯುವರಾಜ್ ಸಿಂಗ್ ಹಲವು ದಿನಗಳ ನಂತರ ಟೀಂ ಇಂಡಿಯಾಕ್ಕೆ ಮರಳಿದ್ದು ನೋಡಿ ಹರ್ಭಜನ್ ಸಿಂಗ್ ಕೂಡಾ ಸ್ಪೂರ್ತಿಗೊಂಡಿದ್ದಾರೆ. ತಾನೂ ಒಂದು ದಿನ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.ನಾನು ಭಾರತ ತಂಡಕ್ಕೆ ಮರಳಲು ಗಮನ ಕೇಂದ್ರೀಕರಿಸಿದ್ದೇನೆ. ಮುಂದಿನ ಮೂರು ತಿಂಗಳಲ್ಲಿ ಮತ್ತೆ ಭಾರತ ತಂಡಕ್ಕೆ ಮರಳಲು ಯಾವುದೇ ಅವಕಾಶ ಸಿಕ್ಕರೂ ಬಳಸಿಕೊಳ್ಳುತ್ತೇನೆ. ಮುಂದಿನ ಚಾಂಪಿಯನ್ಸ್ ಟ್ರೋಫಿಯೇ ನನ್ನ ಗುರಿ. ಇದಕ್ಕಾಗಿ ಪಂಜಾಬ್ ತಂಡ ಮತ್ತು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಲು