Widgets Magazine

ಆರ್ ಸಿಬಿ ಸೋಲಿಸಿದ ಹರ್ಭಜನ್ ಸಿಂಗ್ ಬೌಲಿಂಗ್ ಗೆ ಗೆಳೆಯ ಯುವರಾಜ್ ಸಿಂಗ್ ಖಷಿ

ಚೆನ್ನೈ| Krishnaveni K| Last Modified ಸೋಮವಾರ, 25 ಮಾರ್ಚ್ 2019 (08:48 IST)
ಚೆನ್ನೈ: ಕ್ರಿಕೆಟ್ ಮೈದಾನದ ಹೊರತಾಗಿಯೂ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಗೆಳೆಯರೇ. ಇಬ್ಬರೂ ಕ್ರಿಕೆಟಿಗರೂ ಇದೀಗ ಕ್ರಿಕೆಟ್ ನ ಸಂಧ್ಯಾ ಕಾಲದಲ್ಲಿ ತಮ್ಮನ್ನು ಪ್ರೂವ್ ಮಾಡಿಕೊಳ್ಳುವ ಅನಿವಾರ್ಯತೆಯಲ್ಲಿದ್ದಾರೆ.

 
ಇಬ್ಬರೂ ಟೀಂ ಇಂಡಿಯಾಕ್ಕೆ ಮರಳುವುದು ಕಷ್ಟವೇ. ಆದರೂ ತಾವು ಹಳೆಯ ಹುಲಿಗಳು ಎಂದು ಐಪಿಎಲ್ ಕೂಟದಲ್ಲಿ ಸಾಬೀತುಪಡಿಸಲು ವೇದಿಕೆಗಾಗಿ ಕಾಯುತ್ತಿದ್ದರು.
 
ಅದರಲ್ಲಿ ಭಜಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಯಶಸ್ವಿಯಾಗಿದ್ದಾರೆ. ಆರ್ ಸಿಬಿ ಸೋಲಿಗೆ ಕಾರಣವಾದ ಭಜಿ ಬೌಲಿಂಗ್ ಸ್ಪೆಲ್ ನೋಡಿ ಖುಷಿಯಾಗಿರುವ ಯುವರಾಜ್ ಸಿಂಗ್ ಗೆಳೆಯನನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ‘ಫಾರ್ಮ್ ತಾತ್ಕಾಲಿಕ ಆದರೆ ಕ್ಲಾಸ್ ಯಾವತ್ತಿಗೂ ಶಾಶ್ವತ! ಸಿಂಗ್ ಈಸ್ ಕಿಂಗ್’ ಎಂದು ಭಜಿಗೆ ಟ್ವೀಟ್ ಮೂಲಕ ಯುವಿ ಅಭಿನಂದಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :