ಮುಂಬೈ: ಇಂದಿನ ಯುವ ಕ್ರಿಕೆಟಿಗರು ನಿಜ ಜೀವನದಲ್ಲಿ ಮಾಡದ್ದನ್ನೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಪ್ರಯೋಗ ಮಾಡುತ್ತಲೇ ಕಾಲ ಕಳೆಯುತ್ತಾರೆ ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ.ಜಸ್ಪ್ರೀತ್ ಬುಮ್ರಾ ಜತೆಗಿನ ಇನ್ ಸ್ಟಾ ಲೈವ್ ಚ್ಯಾಟ್ ನಲ್ಲಿ ಮಾತನಾಡಿದ ಯುವಿ ಇಂದಿನ ಯುವ ಕ್ರಿಕೆಟಿಗರು ಸೋಷಿಯಲ್ ಮೀಡಿಯಾದಲ್ಲಿ ಪ್ರಯೋಗ ಮಾಡಲು ಹೊರಡುತ್ತಾರೆ. ನಿಜ ಜೀವನದಲ್ಲಿ ಅವರು ತುಂಬಾ ಡೀಸೆಂಟ್ ಆಗಿರುತ್ತಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅವರು ಹಾಕುವ ಫೋಟೋ, ವಿಡಿಯೋ ನೋಡಿದರೆ