ನವದೆಹಲಿ: ಇತ್ತೀಚೆಗಷ್ಟೇ ಯೋ ಯೋ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾದ ಹಿನ್ನಲೆಯಲ್ಲಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದ ಯುವರಾಜ್ ಸಿಂಗ್ ಬಿಸಿಸಿಐಗೆ ವಿಶಿಷ್ಟವಾಗಿ ತನ್ನ ಫಿಟ್ನೆಸ್ ಪ್ರದರ್ಶನ ಮಾಡಿದ್ದಾರೆ. ಅದು ಬರಿ ಮೈಯಲ್ಲಿ ಫೋಟೋ ಪ್ರಕಟಿಸುವ ಮೂಲಕ. ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಯುವಿ ಖಾಲಿ ಎದೆ ತೋರಿಸುವ ಫೋಟೋ ಹಾಕಿಕೊಂಡು ಪರೋಕ್ಷವಾಗಿ ತಮ್ಮ ಫಿಟ್ನೆಸ್ ಪ್ರಶ್ನಿಸಿದ ಬಿಸಿಸಿಐಗೆ ಟಾಂಗ್ ಕೊಟ್ಟಿದ್ದಾರೆ.ಆದರೆ ಯುವಿ ಮಾಡಿದ ಈ ಕೆಲಸ ಅವರಿಗೇ ಮುಳುವಾಗಿದೆ.