Widgets Magazine

ಹಳೆಯ ಫೋಟೋ ಪ್ರಕಟಿಸಿದ ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಿದ ಯುವರಾಜ್ ಸಿಂಗ್

ಮುಂಬೈ| Krishnaveni K| Last Modified ಶನಿವಾರ, 18 ಮೇ 2019 (09:59 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಳೆಯ ಫೋಟೋ ಪ್ರಕಟಿಸಿ ಹಿರಿಯ ಆಟಗಾರ ಯುವರಾಜ್ ಸಿಂಗ್ ರನ್ನು ಟ್ರೋಲ್ ಗೊಳಗಾಗಿದ್ದಾರೆ.

 
ವಿದೇಶೀ ತಾಣವೊಂದರಲ್ಲಿ ತೆಗೆದ ಹಳೇ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದ ಕೊಹ್ಲಿ ‘ಇದು ಯಾವ ಸ್ಥಳ ಎಂದು ಗುರುತಿಸಬಲ್ಲಿರಾ?’ ಎಂದು ಪ್ರಶ್ನಿಸಿದ್ದರು.
 
ಕೊಹ್ಲಿ ಫೋಟೋಗೆ ಯುವಿ ಪ್ರತಿಕ್ರಿಯಿಸಿದ್ದು ‘ಇದು ಕೊಟಕ್ ಪುರದ ಹಾಗೆ ಕಾಣಿಸುತ್ತಿದೆ. ಏನಂತೀಯಾ ಹರ್ಭಜನ್ ಸಿಂಗ್?’ ಎಂದು ತಮಾಷೆ ಮಾಡಿದ್ದಾರೆ. ಕೊಟಕ್ ಪುರ ಪಂಜಾಬ್ ನ ಒಂದು ನಗರ. ಹೀಗಾಗಿಯೇ ಪಂಜಾಬ್ ಮೂಲದವರೇ ಆದ ಭಜಿಯನ್ನು ಯುವಿ ಈ ರೀತಿ ಪ್ರಶ್ನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :