ಮುಂಬೈ: ಟೀಂ ಇಂಡಿಯಾ ಕ್ರಿಕೆಟಗರು ಇದೀಗ ಹೊಸ ಚಾಲೆಂಜ್ ನಲ್ಲಿ ಬ್ಯುಸಿ. ಅದೇ ಗಡ್ಡ ಬೋಳಿಸುವ ಚಾಲೆಂಜ್. ಅದಕ್ಕೀಗ ಹೊಸ ಕ್ರಿಕೆಟಿಗರೊಬ್ಬರ ಸೇರ್ಪಡೆಯಾಗಿದೆ.ಅದ್ಯಾವಾಗ ರವೀಂದ್ರ ಜಡೇಜಾ ತಮ್ಮ ಗಡ್ಡ ಬೋಳಿಸಿಕೊಂಡು ಐಪಿಎಲ್ ಗೆ ಕಾಲಿಟ್ಟರೋ, ಅಂದಿನಿಂದ ಟೀಂ ಇಂಡಿಯಾ ಕ್ರಿಕೆಟಿಗರು ಒಬ್ಬರಾದ ಮೇಲೊಬ್ಬರಂತೆ ಗಡ್ಡ ಬೋಳಿಸುವುದರಲ್ಲಿ ತೊಡಗಿದ್ದಾರೆ.ಹೀಗಾಗಿ ಇಷ್ಟು ದಿನ ದಾಡಿ ಬಿಟ್ಟುಕೊಂಡು ಓಡಾಡುತ್ತಿದ್ದ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ತಾವು ಗಡ್ಡ ಬೋಳಿಸಿಕೊಂಡಿದ್ದಲ್ಲದೆ, ಟ್ವಿಟರ್ ನಲ್ಲಿ ಫೋಟೋ ಹಾಕಿದ್ದರು.