ರಾಂಚಿ: ಕ್ರಿಕೆಟಿಗ ಧೋನಿ ಪುತ್ರಿ ಜೀವಾ ಧೋನಿ ಎಷ್ಟು ಚೂಟಿ ಹುಡುಗಿ ಎಂದು ಹಲವಾರು ಬಾರಿ ನೋಡಿದ್ದೇವೆ. ಆಗಾಗ ಈ ಮುದ್ದು ಹುಡುಗಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಿಂದೊಮ್ಮೆ ಮಲಯಾಳ ಹಾಡಿಗೆ ಧ್ವನಿಯಾಗಿದ್ದ ಜೀವಾ, ಇದೀಗ ಮತ್ತೊಮ್ಮೆ ಮತ್ತೊಂದು ಮಲಯಾಳ ಹಾಡು ಹಾಡಿ ಮ್ಯಾಜಿಕ್ ಮಾಡಿದ್ದಾಳೆ. ಆಕೆಯ ತೊದಲು ಸ್ವರದಲ್ಲಿ ಆ ಹಾಡಿನ ಸಾಲು ಸ್ಪಷ್ಟವಾಗದಿದ್ದರೂ ಟ್ಯಾಬ್ ಹಿಡಿದುಕೊಂಡು ಪಕ್ಕಾ ಗಾಯಕಿಯಂತೆ ಗಂಭೀರವಾಗಿ ಕೂತು ಹಾಡುವ