ಸಾನಾ : ಅತೀ ದುಖಃವಾದಾಗ ಮತ್ತು ಅತಿ ಹೆಚ್ಚು ಆನಂದವಾದಾಗಲೂ ಕೂಡ ಕಣ್ಣಿನಿಂದ ನೀರು ಬರುತ್ತವೆ. ಆದರೆ ಕಣ್ಣಿನಿಂದ ನೀರು ಬರುವ ಬದಲು ಕಲ್ಲು ಉದುರುತ್ತದೆ. ಈ ವಿಷಯ ಕೇಳಿ ನಿಮಗೆ ಆಶ್ಚರ್ಯವಾಗಬಹುದು , ಆದರೆ ಇದು ಸತ್ಯ . ಯೆಮನ್ನಲ್ಲಿ ವಾಸವಿರುವ 12 ವರ್ಷದ ಹುಡುಗಿಯ ಕಣ್ಣಿನಲ್ಲಿ ನೀರಲ್ಲ , ಸಣ್ಣ ಸಣ್ಣ ಕಲ್ಲುಗಳು ಉದುರುತ್ತವೆ. ಇದನ್ನು ಕಂಡ ವೈದ್ಯರು ಕೂಡ ಆಶ್ಚರ್ಯ ಚಕಿತರಾಗಿದ್ದಾರೆ. ವಿಜ್ಞಾನಕ್ಕೆ ಸವಾಲಾದ ಘಟನೆಯೊಂದು ವರದಿಯಾಗಿದೆ.