ಬಿಜೆಪಿಗೆ ಮರುಸೇರ್ಪಡೆಯಾದ ಯಡಿಯೂರಪ್ಪಗೆ ಸಿಕ್ಕಿದ್ದೇನು?

ವೆಬ್‌ದುನಿಯಾ| Last Modified ಮಂಗಳವಾರ, 28 ಜನವರಿ 2014 (13:56 IST)
PR
PR
ಇಂದು ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಮುಖಂಡ ಕೊನೆಗೂ ಪಾಲ್ಗೊಳ್ಳುವ ಮೂಲಕ ಆಂತರಿಕವಾಗಿ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದರೂ ಬಹಿರಂಗವಾಗಿ ತೋರಿಸಿಕೊಳ್ಳುವ ಯತ್ನ ಮಾಡಿಲ್ಲ. ಸಮಿತಿಯ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿ ಇನ್ನೂ ನೀಡದಿರುವುದರಿಂದ ಯಡಿಯೂರಪ್ಪ ಸಹಜವಾಗಿ ಮುನಿಸಿಕೊಂಡು, ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳದೇ ದೂರವುಳಿದಿದ್ದರು. ಕೆಜೆಪಿಯನ್ನು ತೊರೆದು ಬಿಜೆಪಿ ಸೇರಿದ ತಮ್ಮ ಪಕ್ಷದ ಮುಖಂಡರಿಗೆ ಕೂಡ ಯಾವುದೇ ಸ್ಥಾನಮಾನ ನೀಡಿಲ್ಲ. ಮಾತೃಪಕ್ಷದಲ್ಲಿ ಸೂಕ್ತ ಸ್ಥಾನ ಸಿಗುತ್ತೆ ಎಂಬ ನಿರೀಕ್ಷೆ ಇಟ್ಟುಕೊಂಡು ಕೆಜೆಪಿಯ ಶಾಸಕರು ಬಿಜೆಪಿಗೆ ಸೇರಿದ್ದರು. ಆದರೆ ಈಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎನ್ನುವ ಸ್ಥಿತಿ ಕೆಜೆಪಿ ಮಾಜಿ ಶಾಸಕರ ಪರಿಸ್ಥಿತಿಯಾಗಿದೆ.


ಇದರಲ್ಲಿ ಇನ್ನಷ್ಟು ಓದಿ :