Widgets Magazine

ಮುಗಿಯಿತು ಚುನಾವಣೆ ಸಮರ: ಮತಎಣಿಕೆಯತ್ತ ಎಲ್ಲರ ಚಿತ್ತ

ವೆಬ್‌ದುನಿಯಾ|
PR
PR
ಬೆಂಗಳೂರು: ಕಳೆದ 20 ದಿನಗಳಿಂದ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಲೋಕಸಭೆ ಉಪಚುನಾವಣೆಗೆ ಮತದಾರ ತೆರೆಎಳೆದಿದ್ದಾನೆ. ಆದರೆ ಮತದಾನದ ಅಂಕಿ, ಅಂಶಗಳನ್ನು ಗಮನಿಸಿದರೆ ನಿರೀಕ್ಷೆ ಮಾಡಿದ ರೀತಿಯಲ್ಲಿ ನಡೆದಿಲ್ಲ ಎನ್ನುವುದನ್ನು ತೋರಿಸುತ್ತಿದೆ. ಬೆಳಿಗ್ಗೆಯಿಂದ ಮತದಾನ ನೀರಸವಾಗಿದ್ದು, ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಒಟ್ಟಾರೆಯಾಗಿ ಶೇ. 52 ಮತದಾನವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇ. 50.93 ಮತದಾನವಾಗಿದೆ. ಕುಣಿಗಲ್‌ನಲ್ಲಿ ಶೇ. 63.39, ರಾಜರಾಜೇಶ್ವರಿ ನಗರದಲ್ಲಿ ಶೇ. 32.05, ಆನೇಕಲ್ ಶೇ. 40, ಮಾಗಡಿಯಲ್ಲಿ ಶೇ. 60.05, ರಾಮನಗರದಲ್ಲಿ ಶೇ. 66 , ಕನಕಪುರ 63, ಚನ್ನಪಟ್ಟಣ ಶೇ. 56 ಮತದಾನವಾಗಿದೆ. ಮತದಾನ ಭರದಿಂದ ನಡೆಯಬಹುದೆಂಬ ವಿವಿಧ ಪಕ್ಷಗಳ ನಾಯಕರ ಲೆಕ್ಕಾಚಾರ ಠುಸ್ ಆಗಿದೆ.


ಇದರಲ್ಲಿ ಇನ್ನಷ್ಟು ಓದಿ :