ಸಿಖ್ ವಿರೋಧಿ ಗಲಭೆ: ರಾಹುಲ್ ಹೇಳಿಕೆಯಿಂದ ಸಂಕಟದಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್

ವೆಬ್‌ದುನಿಯಾ| Last Modified ಶುಕ್ರವಾರ, 31 ಜನವರಿ 2014 (11:56 IST)
PR
PR
ನವದೆಹಲಿ: ರಾಹುಲ್ ಗಾಂಧಿ ಟಿವಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಸಿಖ್ ವಿರೋಧಿ ಗಲಭೆಯನ್ನು ಚರ್ಚೆಗೆ ತಂದಿರುವುದು ಕಾಂಗ್ರೆಸ್‌ಗೆ ಕಳವಳವುಂಟುಮಾಡಿದೆ. ಗುಜರಾತಿನಲ್ಲಿ ಮುಸ್ಲಿಂ ವಿರೋಧಿ ಕಗ್ಗೊಲೆಯನ್ನು ಮುಂದಿಟ್ಟುಕೊಂಡು ಮೋದಿ ವಿರುದ್ಧ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ವಾಗ್ದಾಳಿ ನಡೆಸಬೇಕೆಂದು ಯೋಚಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ಎಲ್ಲವೂ ಉಲ್ಟಾ ಹೊಡೆಯುವಂತೆ ಭಾಸವಾಗುತ್ತಿದೆ.ಸಿಖ್ ಸಂಘಟನೆಗಳ ಏರಿದ ಪ್ರತಿಭಟನೆ ಮತ್ತು ಸುದ್ದಿ ಬುಲೆಟಿನ್‌ಗಳಲ್ಲಿ 1984ರ ಗಲಭೆಯದ್ದೇ ಸುದ್ದಿಯಿಂದ ಸಜ್ಜನ್ ಕುಮಾರ್ ಮತ್ತು ಟೈಟ್ಲರ್ ಮುಂತಾದ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿದ್ದ ಕಾಂಗ್ರೆಸ್‌ಗೆ ಸಿಖ್ ವಿರೋಧಿ ಗಲಭೆಯ ಭೂತ ಕಾಡುತ್ತಿದೆ.


ಇದರಲ್ಲಿ ಇನ್ನಷ್ಟು ಓದಿ :