9 ವರ್ಷಗಳ ಬಳಿಕ ಪತ್ತೆಯಾದ ಗೋಸ್ಟ್ ಶಿಪ್..!!

ಬೆಂಗಳೂರು| Atitha| Last Modified ಸೋಮವಾರ, 3 ಸೆಪ್ಟಂಬರ್ 2018 (17:12 IST)
2009 ರಲ್ಲಿ ಹಿಂದೂ ಮಹಾಸಾಗರದಲ್ಲಿ ಕಣ್ಮರೆಯಾಗಿದ್ದ ಹಡಗೊಂದು 9 ವರ್ಷಗಳ ನಂತರ ಇದೀಗ ಕಾಣಿಸಿಕೊಡಿದ್ದು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. ಇಂಡೋನೇಷಿಯಾಗೆ ಸೇರಿದ ಸ್ಯಾಮ್ ರಾಟುಲ್ಯಾಂಗಿ ಪಿಬಿ 100 ಎನ್ನುವ ಸರಕು ಸಾಗಾಣಿಕಾ ಹಡಗು ತೈವಾನ್‌ನ ಹಿಂದೂ ಮಹಾಸಾಗರದಲ್ಲಿ ಕಣ್ಮರೆಯಾಗಿತ್ತು. ಈ ಹಡಗಿಗಾಗಿ ನಡೆಸಿದ ಶೋಧ ವ್ಯರ್ಥವಾಗಿತ್ತು.
ಆದರೆ ಒಂದು ವಾರದ ಹಿಂದೆ ಮಯನ್ಮಾರ್ ಸಮೀಪ ಈ ಹಡಗು ಮತ್ತೆ ಕಾಣಿಸಿಕೊಂಡಿದೆ. ಈ ಹಡಗು ಅಲ್ಲಿನ ಮೀನುಗಾರರಿಗೆ ಕಾಣಿಸಿದ್ದು ಅವರು ಒಳಗೆ ಹೋಗಿ ನೋಡಿದಾಗ ಯಾರೂ ಇರದಿದ್ದುದು ಅಚ್ಚರಿಗೆ ಕಾರಣವಾಗ ವಿಷಯವಾಗಿದೆ. ಈ ಹಡಗು ಈಗಲೂ ಚಾಲನೆಗೆ ಶಕ್ತವಾಗಿದೆ ಎಂದು ಸಾಗರ ತಜ್ಞರು ತಿಳಿಸಿದ್ದು, 9 ವರ್ಷಗಳ ಕಾಲ ಈ ಹಡಗು ಎಲ್ಲಿತ್ತು ಮತ್ತು ಅದರಲ್ಲಿದ್ದ ಸಿಬ್ಬಂದಿಗಳು ಏನಾದರು ಎನ್ನುವುದು ಚರ್ಚೆಗೆ ಕಾರಣವಾದ ವಿಷಯವಾಗಿದೆ. ಆದ್ದರಿಂದ ಜನರು ಇದನ್ನು ಗೋಸ್ಟ್ ಶಿಪ್ ಎಂದು ಕರೆಯುತ್ತಿದ್ದಾರೆ.
 
ಈ ಬೃಹತ್ ಹಡಗು ನಾಕಾಯಾನ ಪ್ರಪಂಚವನ್ನೇ ತಲ್ಲಣಗೊಳಿಸಿದೆ. 9 ವರ್ಷಗಳ ಹಿಂದೆ ನಾಪತ್ತೆಯಾದ ಹಡಗು ಇಷ್ಟು ದಿನ ಎಲ್ಲಿತ್ತು, ಅದರಲ್ಲಿದ್ದ ಸಿಬ್ಬಂದಿಗಳು ಏನಾದರು, ಸಿಬ್ಬಂದಿಯೇ ಇಲ್ಲದೇ ಹಡಗು ಸಂಚರಿಸಿದ್ದು ಹೇಗೆ ಎನ್ನುವುದು ಸಾಗರ ತಜ್ಞರ ಮುಂದಿರುವ ಪ್ರಶ್ನೆಯಾಗಿದೆ.


ಇದರಲ್ಲಿ ಇನ್ನಷ್ಟು ಓದಿ :