ಬೆಂಗಳೂರು(ಜು.24): ಇ ಕಾಮರ್ಸ್ ದಿಗ್ಗಜರಾದ ಅಮೆಜಾನ್(AMZN.O)) ಹಾಗೂ ವಾಲ್ಮಾರ್ಟ್ ಮಾಲೀಕತ್ವದ ಫ್ಲಿಪ್ಕಾರ್ಟ್(WMT.N) ಕಾನೂನು ಹೋರಾಟಕ್ಕೆ ಹಿನ್ನಡೆಯಾಗಿದೆ. ಭಾರತದ ಸ್ಪರ್ಧಾತ್ಮಕ ಆಯೋಗ(CCI) ಆದೇಶಿಸಿದ್ದ ತನಿಖೆ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು, ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠ ರದ್ದುಗೊಳಿಸಿದೆ. ಅಮೇಜಾನ್ಗೆ ಬುದ್ಧಿ ಕಲಿಸಿದ ಕನ್ನಡಿಗರು, ಭೇಷ್ ಎಂದ ಮಾಜಿ ಮುಖ್ಯಮಂತ್ರಿ!ಅಮೆರಿಕ ಇ ಕಾಮರ್ಸ್ ಸಂಸ್ಥೆಗಳು ಆಯ್ದ ಮಾರಾಟಗಾರರಿಗೆ ತಮ್ಮ ಪ್ಲಾಟ್ಫಾರ್ಮ್ನಲ್ಲಿ ಅವಕಾಶ ನೀಡಿ, ವಹಿವಾಟು ಸ್ಪರ್ಧೆಯನ್ನು ನಿಗ್ರಹಿಸುವ ವ್ಯಾಪಾರ ಅಭ್ಯಾಸಗಳಿಗೆ ಬಳಸಿಕೊಂಡಿವೆ