ಕಡಲ ತೀರದಲ್ಲಿ ಚಂಡಮಾರುತ ಅಬ್ಬರ ಜೋರಾಗಿದ್ದು, ಓಖಿಯ ಹೊಡೆತಕ್ಕೆ ಮದುವೆ ಮನೆಯಿಂದ ವಧು-ವರ ಹಾಗೂ ಸಂಬಂಧಿಕರು ಓಡಿ ಹೋಗಿರುವ ಘಟನೆ ನಡೆದಿದೆ. ಮಂಗಳೂರಿನ ಉಳ್ಳಾಲದ ಕಡಲ ಕಿನಾರೆಯ ಸಮುದ್ರ ತೀರದಲ್ಲಿ ಮದುವೆಯ ವೇದಿಕೆಗೆ ಚಂಡಮಾರುತದ ಅಲೆ ಅಪ್ಪಳಿಸಿದೆ. ಅಲೆಯ ರಭಸಕ್ಕೆ ಬೆದರಿದ ವಧು-ವರ ಹಾಗೂ ಸಂಬಂಧಿಕರು ವೇದಿಕೆಯಿಂದ ಓಡಿ ಹೋಗಿದ್ದಾರೆ. ಮಂಗಳೂರು ಭಾಗದಲ್ಲಿ ಓಖಿ ಅಬ್ಬರ ಇನ್ನೂ ಮುಂದುವರೆದಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.