ಕೊರೊನಾ ಎರಡನೇ ಅಲೆ ಕಡಿಮೆ ಆಗಿದ್ದರೂ ಮೂರನೇ ಅಲೆ ಬರೋದಿಲ್ಲ ಅಂತೇನಿಲ್ಲ. ಆದರೂ ಜನರು ಮುನ್ನೆಚ್ಚರಿಕೆ ಇಲ್ಲದೇ ಸೇರುವುದು ನೋಡಿದರೆ ಭಯ ಆಗುತ್ತದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳ ವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ದೇವಸ್ಥಾನ, ಮಾರ್ಕೆಟ್ ಗಳಲ್ಲಿ ಮಿತಿಮೀರಿದ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಇದನ್ನು ಗಮನಿಸಿದರೆ ಭಯವಾಗುತ್ತದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದರು. ಮೂರನೇ ಅಲೆ ಎದುರಾಗುವ ಅವಕಾಶ ನಾವು ಕೊಡಬಾರದು. ನಮ್ಮ ನಡವಳಿಕೆಗಳಲ್ಲಿ