ದೇಶದಲ್ಲಿ ನಾನಾ ತರಹದ ಮಾರುಕಟ್ಟೆಗಳಿವೆ. ಅವೆಲ್ಲದರಿಗಿಂತ ಭಿನ್ನವಾಗಿ ನಮಗೆ ಕಾಣಸಿಗುವುದು ಈ ಚೋರ್ ಬಜಾರ್ಗಳು. ಇಲ್ಲಿ ಎಲ್ಲಾ ತರಹದ ವಸ್ತುಗಳು ಲಭ್ಯವಿರುತ್ತವೆ. ಕಡಿಮೆ ಬೆಲೆ ಕೊಟ್ಟು ಬ್ರಾಂಡೆಡ್ ವಸ್ತುಗಳನ್ನು ನಾವು ಇಲ್ಲಿ ಖರೀದಿಸಬಹುದು ಆದರೆ ಆ ವಸ್ತುಗಳು ಹೇಗೆ ಬಾಳಿಕೆ ಬರುತ್ತದೆ ಎಂಬುದು ಬಳಸಿದ ಮೇಲೆಯೇ ತಿಳಿಯಬೇಕು. ಕೆಲವೊಮ್ಮೆ ಇಲ್ಲಿ ಖರೀದಿಸಿದ ವಸ್ತುಗಳು ಚೆನ್ನಾಗಿ ಬಾಳಿಕೆ ಬರುತ್ತವೆ. ಕೆಲವೊಮ್ಮೆ ನಾವು ನಕಲಿ ವಸ್ತುಗಳನ್ನು ಖರೀದಿಸಿ ಮೋಸ ಹೋಗುವುದು ಉಂಟು.