Widgets Magazine

ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರವನ್ನು ತಡೆಯಲು 19 ವರ್ಷದ ಹುಡುಗಿ ಮಾಡಿದ್ದೇನು ಗೊತ್ತಾ...?

ಬೆಂಗಳೂರು| pavithra| Last Modified ಭಾನುವಾರ, 7 ಜನವರಿ 2018 (07:55 IST)
ಬೆಂಗಳೂರು: ಇತ್ತೀಚೆಗೆ ಹೆಣ್ಣುಮಕ್ಕಳ ಮೇಲೇ ಅತ್ಯಾಚಾರ ಹಾಗು ಕಿರುಕುಳಕ್ಕೆ ಸಂಬಂಧಿಸಿದ ಘಟನೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು,ಇದನ್ನು ತಪ್ಪಿಸಲು ಸಹಾಯವಾಗುವಂತಹ ಮಾಡೆಲ್ ಒಂದನ್ನು 19 ವರ್ಷದ ಸೀನು ಕುಮಾರಿ ಎಂಬ ಹುಡುಗಿ ತಯಾರಿಸಿದ್ದಾಳೆ.


ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದ ಪ್ರಕರಣವೊಂದರಿಂದ ಘಾಸಿಗೊಂಡ ಸೀನು ಮುಂದೆ ಹೆಣ್ಣುಮಕ್ಕಳು ಇಂತಹ ಘಟನೆಗೆ ಬಲಿಯಾಗಬಾರದೆಂದು ನಿರ್ಧರಿಸಿ ರೇಪ್ ಪ್ರೂಫ್ ಹೆಣ್ಣುಮಕ್ಕಳ ಪ್ಯಾಂಟಿಯೊಂದನ್ನು ತಯಾರಿಸಿದ್ದಾಳೆ. ಇದು ಸಾಮಾನ್ಯ ಪ್ಯಾಂಟಿಯಲ್ಲ. ಇದರಲ್ಲಿ ಎಲೆಕ್ಟ್ರಾನಿಕ್ ಟೆಕ್ನಾಲಜಿ ಅಳವಡಿಸಲಾಗಿದೆ ಹಾಗೆ

ಸ್ಮಾರ್ಟ್ ಲಾಕ್ ಕೂಡ ಇದೆ. ಅದನ್ನು ಪಾಸ್ವರ್ಡ್ ಮೂಲಕ ಮಾತ್ರ ತೆಗೆಯಲು ಸಾಧ್ಯ.


ಸ್ಥಳ ಪತ್ತೆಮಾಡಲು ಜಿ.ಪಿ.ಆರ್.ಎಸ್.ನ್ನು ಅಳವಡಿಸಲಾಗಿದೆ. ಇದರಲ್ಲಿ ಸಂಭಾಷಣೆ ಕೂಡ ರೆಕಾರ್ಡ್ ಮಾಡಬಹುದು. ಇದರಲ್ಲಿರುವ ಬಟನ್ ಒಂದನ್ನು ಪ್ರೆಸ್ ಮಾಡಿದರೆ ಜಿ.ಪಿ.ಆರ್.ಎಸ್ ಆಕ್ಟಿವ್ ಆಗುತ್ತದೆ. ಇದನ್ನು ಚಾಕುವಿನಿಂದ ಕತ್ತರಿಸುವುದಾಗಲಿ,ಸುಡುವುದಾಗಲಿ ಮಾಡಲು ಸಾಧ್ಯವಿಲ್ಲ. ಹಕ್ಕು ಸ್ವಾಮ್ಯಕ್ಕಾಗಿ ಎನ್.ಐ.ಎಫ್.ಗೆ ಅರ್ಜಿ ಸಲ್ಲಿಸಲಾಗಿದೆ. ಇದನ್ನು ತಯಾರಿಸಲು ಆಕೆ 5 ಸಾವಿರ ರೂ. ಖರ್ಚು ಮಾಡಿರುವುದಾಗಿ ಹೇಳಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :