ನವದೆಹಲಿ: ಗ್ಯಾನವ್ಯಾಪಿ ಮಸೀದಿಯೊಳಗೆ ವಿಡಿಯೋ ಸಮೇತ ಸರ್ವೇ ಕಾರ್ಯ ಅಂತ್ಯಗೊಂಡಿದ್ದು, ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಅರ್ಜಿದಾರರ ಪರ ವಕೀಲ ಹೇಳಿದ್ದಾರೆ. ಕೋರ್ಟ್ ಗ್ಯಾನವ್ಯಾಪಿ ಮಸೀದಿಯಲ್ಲಿ ವಿಡಿಯೋ ಸರ್ವೇ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಮಂಗಳವಾರ ಸರ್ವೇ ವರದಿಯನ್ನು ಕೋರ್ಟ್ಗೆ ಸಲ್ಲಿಸುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಸರ್ಕಾರಿ ಅಧಿಕಾರಿಗಳ ತಂಡ ಸರ್ವೇ ಕಾರ್ಯ ಮಾಡಿದ್ದು, ಇಂದು ಅದು ಅಂತ್ಯಗೊಂಡಿದೆ ಎಂದು ವಕೀಲ ವಿಷ್ಣು ಜೈನ್ ಮಾಹಿತಿ ನೀಡಿದ್ದಾರೆ. ಜತೆಗೆ ಸಿವಿಲ್