ನದಿಗೆ ಉರುಳಿದ ಗೂಡ್ಸ್ ವಾಹನ: ಜಾನುವಾರುಗಳ ದುರ್ಮರಣ

bengaluru| geethanjali| Last Modified ಸೋಮವಾರ, 26 ಜುಲೈ 2021 (15:25 IST)

 

ಮೊಳವಾಡ ಗ್ರಾಮದಿಂದ ಕುಸನಾಳ ಗ್ರಾಮಕ್ಕೆ ಜಾನುವಾರು ಮತ್ತು ಮಹಿಳೆಯನ್ನ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಸೋಮವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ.

ಪ್ರವಾಹದ ನಡುವೆ ನದಿ ನೀರಿನಲ್ಲೇ ವಾಹನ ಚಲಾಯಿಸಿ ಸಾಹಸ ತೋರಲು ಚಾಲಕ ಯತ್ನಿಸಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ವಾಹನ ಉರುಳಿ ಬಿದ್ದಿದೆ.

ವಾಹನದಲ್ಲಿದ್ದ ಮಹಿಳೆ ಹಾಗೂ ಚಾಲಕನನ್ನು ಸ್ಥಳೀಯರು ರಕ್ಷಿಸಿದ್ದು, ವಾಹನದೊಳಗೆ ಸಿಲುಕಿದ ಜಾನುವಾರುಗಳು ಸಿಲುಕಿ ಮೃತಪಟ್ಟಿವೆ. ಎರಡು ಎಮ್ಮೆ ಹಾಗೂ ಒಂದು ಹಸು ನೀರಿನಲ್ಲಿ ಮುಳುಗಿ ಮೃತಪಟ್ಟಿವೆ.ಇದರಲ್ಲಿ ಇನ್ನಷ್ಟು ಓದಿ :