ವಿಜಯಪುರ|
Hanumanthu.P|
Last Modified ಬುಧವಾರ, 6 ಡಿಸೆಂಬರ್ 2017 (12:53 IST)
ಪಾಸ್ಪೋರ್ಟ್ ಮತ್ತು ವೀಸಾ ಪರಿಶೀಲನೆಗೆ ಬರುವ ಯುವತಿಯರಿಗೆ ಮತ್ತು ಮಹಿಳೆಯರಿಗೆ ಪಿಎಸ್ಐಯೊಬ್ಬರು ಪೋಲಿ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿದ್ದ ಘಟನೆ ಜರುಗಿದೆ.
ವಿಜಯಪುರದ ಹೊರ್ತಿ ಠಾಣೆಯ ಪಿಎಸ್ಐ ಪ್ರಕಾಶ್ ರಾಠೋಡ ಅವರ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಜಮಖಂಡಿಯ ಬನಹಟ್ಟಿ ಯುವತಿಯೊಬ್ಬರು ಬಾಗಲಕೋಟೆ ಎಸ್ಪಿಗೆ ದೂರು ನೀಡಿದ್ದಾರೆ.
ಪ್ರಕಾಶ್ ಅವರು ಬನಹಟ್ಟಿ ಠಾಣೆಯಲ್ಲಿ ಪಿಎಸ್ಐ ಆಗಿದ್ದಾಗ ಯುವತಿಯರಿಗೆ ಮೆಸೇಜ್
ಕಳುಹಿಸಿ ಫ್ರೆಂಡ್ಶಿಪ್ ಮಾಡುವಂತೆ ಹೇಳುತ್ತಿದ್ದರು. ವಿರೋಧಿಸಿದವರಿಗೆ ಗೂಂಡಾಗಳಿಂದ ಬೆದರಿಕೆ ಹಾಕಿಸುತ್ತಿದ್ದರು ಎಂದು ಯುವತಿ ಆರೋಪಿಸಿದ್ದಾರೆ
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.