ನಿರ್ಮಾಪಕರನ್ನು ಬಿಟ್ಟು ಕೊಡುವುದಿಲ್ಲ. ಈ ಪ್ರಕರಣಕ್ಕೆ ನಾವು ಮಂಗಳ ಹಾಡಿದ್ದೇವೆ. ಇಲ್ಲಿಗೆ ಬಿಟ್ಟುಬಿಡಿ. ಉಮಾಪತಿ ಯಾವಾಗಲೂ ನಮ್ಮ ನಿರ್ಮಾಪಕರು. ಯಾವಾಗಲೂ ನಾನು ಅವರಿಗೆ ಅಣ್ಣಾನೇ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾರನ್ನೂ ಅರೆಸ್ಟ್ ಮಾಡಲ್ಲ. ಇದರಲ್ಲಿ ಏನೂ ಇಲ್ಲ. ಹಾಗಾಗಿ ಈ ಪ್ರಕರಣವನ್ನು ಇಲ್ಲಿಗೆ ಬಿಟ್ಟುಬಿಟ್ಟಿದ್ದೇವೆ ಎಂದರು. ಘಟನೆ ಬಗ್ಗೆ ನಾನು ಮತ್ತು ಉಮಾಪತಿ ಮಾತನಾಡಿಕೊಳ್ಳುತ್ತೇವೆ. ಅವರು ಯಾವಾಗಲೂ ನಮ್ಮ ನಿರ್ಮಾಪಕರೇ.