ತಿರುವನಂತಪುರಂ(ಆ.03): ಸತತ 6 ದಿನಗಳಿಂದ 20 ಸಾವಿರಕ್ಕಿಂತ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದ ಕೇರಳದಲ್ಲಿ ಸೋಮವಾರ ಹೊಸ ಕೇಸಿನ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಸೋಮವಾರ ರಾಜ್ಯದಲ್ಲಿ 13984 ಕೇಸು ದಾಖಲಾಗಿದ್ದು, 118 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 34.25 ಲಕ್ಷಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1.65 ಲಕ್ಷದಷ್ಟಿದೆ. ಇನ್ನೊಂದೆಡೆ 6 ದಿನಗಳ ಬಳಿಕ ಪಾಸಿಟಿವಿಟಿ ದರ ಶೇ.11ಕ್ಕಿಂತ ಕಡಿಮೆ ದಾಖಲಾಗಿದೆ. ದ.ಕ., ಉಡುಪಿ ಹಳ್ಳಿಗಳಲ್ಲಿ