ಸತ್ತನಂತರ ಆತ್ಮ ಮೊದಲು ಬರುವ ಜಾಗ ಗೊತ್ತಾ...!!!!

ಬೆಂಗಳೂರು| ಗುರುಮೂರ್ತಿ| Last Modified ಶುಕ್ರವಾರ, 23 ಫೆಬ್ರವರಿ 2018 (19:22 IST)
ಮನುಷ್ಯ ಸತ್ತ ನಂತರ ಏನಾಗುತ್ತಾನೆ ಎಂಬುದು ತಲೆಮಾರುಗಳಿಂದ ಕಾಡುತ್ತಿರುವ ಪ್ರಶ್ನೆ ಕೆಲವು ಪಂಡಿತರ ಪ್ರಕಾರ ಸತ್ತ ನಂತರ ಮೋಕ್ಷ ಹೊಂದುತ್ತದೆ ಎಂದು ಹೇಳಿದರೆ ಇನ್ನು ಕೆಲವರು ಆತ್ಮ ಸ್ಮರ್ಗಕ್ಕೆ ಇಲ್ಲವೇ ನರಕಕ್ಕೆ ಹೋಗುತ್ತದೆ ಎನ್ನುತ್ತಾರೆ. ಅಷ್ಟೇ ಅಲ್ಲ ಸತ್ತಮೇಲೆ ನಮ್ಮ ಆತ್ಮವನ್ನು ಕರೆದೊಯ್ಯಲು ಕಿಂಕರರು ಬರುತ್ತಾರೆ ಎನ್ನುವುದು ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಾಗಿರುವುದನ್ನು ನಾವು ಓದಿರುತ್ತೇವೆ.

ಆಸ್ತಿಕರಿಗೆ ಅವೆಲ್ಲಾ ನಿಜ ಅನಿಸಿದರೆ, ನಾಸ್ತಿಕರಿಗೆ ಅದು ಇರಬಹುದೇನೋ ಎನ್ನುವ ಮನಸ್ಥಿತಿ. ನಿಜವಾಗಿಯು ಇವೆಲ್ಲಾ ಇದೆಯಾ...!! ಎನ್ನೋ ನಿಮ್ಮ ಪ್ರಶ್ನೆಗೆ ಕೆಲವು ಸಂಗತಿಗಳು ನಿಮ್ಮನ್ನು ನಂಬುವ ಹಾಗೇ ಮಾಡುತ್ತವೆ. ಅದಕ್ಕೆ ಪೂರಕವಾಗಿ ಕೆಲವು ಪ್ರದೇಶದಲ್ಲಿರುವ ದೇವಸ್ಥಾನಗಳಾಗಿರಬಹುದು, ಇಲ್ಲವೇ ಹಳೆಯ ಕಾಲದಲ್ಲಿ ಬರೆದಿರುವ ತಾಳೆ ಗ್ರಂಥಗಳು ಇಲ್ಲವೇ ಅಲ್ಲಿನ ಆಚಾರ ವಿಚಾರ ನಂಬಿಕೆಗಳು ಇಂತಹ ಕೆಲವು ವಿಷಯಗಳಿಗೆ ಪುಷ್ಟಿ ನೀಡುತ್ತವೆ. ಹಾಗಾದ್ರೆ ನಿಜವಾಗಿಯೂ ನರಕ, ಯಮ, ಮೋಕ್ಷ ಇವೆಲ್ಲ ಇದೆಯೇ ಎನ್ನೋರಿಗೆ ಹೌದು ಎನ್ನುತ್ತೆ ಈ ವರದಿ.
ಕೆಲವೊಂದು ಪ್ರದೇಶಗಳಲ್ಲಿನ ವಿಚಾರಗಳು, ಸಂಸ್ಕೃತಿ, ಪರಂಪರಾಗತವಾಗಿ ರೂಢಿಸಿಕೊಂಡಿರುವ ಚಿಂತನೆಗಳ ಕುರಿತು ಚರ್ಚಿಸಿದಾಗ ಕೆಲವು ನಿಗೂಢ ವಿಷಯಗಳು ನಮ್ಮನ್ನು ಅದು ಇರಬಹುದೇನೋ ಎನ್ನುವ ಸುಳಿಯಲ್ಲಿ ನೂಕಲ್ಪಡುತ್ತದೆ. ಹೌದು ಹಿಮಾಚಲ್ ಪ್ರದೇಶದಲ್ಲಿರುವ ಒಂದು ದೇವಾಲಯ ಈ ಎಲ್ಲಾ ಕೂತುಹಲಗಳನ್ನು ಹುಟ್ಟುಹಾಕುತ್ತದೆ. ಅಲ್ಲಿನ ಜನರು ಆಸ್ತಿಕರಾಗಿರಬಹುದು ಇಲ್ಲವೇ ನಾಸ್ತಿಕರಾಗಿರಬಹುದು ಆ ದೇವಸ್ಥಾನಕ್ಕೆ ಹೋಗಲು ಭಯಪಡುತ್ತಾರೆ ಅಲ್ಲದೇ ಅಲ್ಲಿರುವ ದೇವರ ದರ್ಶನ ಮಾಡಲು ಸಹ ಹಿಂಜರಿಯುತ್ತಾರೆ ಅಂತಹದೇನಿದೆ ಅನ್ನೋ ಕೂತುಹಲ ನಿಮಗೆ ಉಂಟಾಗಿರಬಹುದು ಹೇಳ್ತಿವಿ ಓದಿ..
ದೇಶದ ರಾಜಧಾನಿಯಿಂದ ಸುಮಾರು 500 ಕೀಮಿ ದೂರದಲ್ಲಿರುವ ಹಿಮಾಚಲ್ ಪ್ರದೇಶದಲ್ಲಿರುವ ಚಂಬಾ ಜಿಲ್ಲೆಯ ಭರ್ಮೂರ್ ‌ಹೆಸರಿನ ಪ್ರದೇಶದಲ್ಲಿ ಒಂದು ದೇವಾಲಯವಿದ್ದು, ಅದು ಪೌರಾಣಿಕ ಹಿನ್ನಲೆಯೊಂದಿಗೆ ವಿಶಿಷ್ಟವಾದ ಕಥೆಗಳ ಮೂಲಕ ಜನಪ್ರಿಯವಾಗಿದೆ. ಈ ದೇವಾಲಯವು ಚಿಕ್ಕದಾದ ಮನೆಗಳ ಮಾದರಿಯಲ್ಲಿದ್ದು, ಈ ಸ್ಥಳದಲ್ಲಿ ಜನರು ದೇವಾಲಯದ ಒಳಪ್ರವೇಶಿಸಲು ಹೆದರುತ್ತಾರೆ. ಅದೆಷ್ಟೋ ಜನರು ದೇವಾಲಯದ ಹೊರಗಿಂದಲೇ ಕೈ ಮುಗಿದು ಹೊರಟು ಹೋಗುತ್ತಾರೆ. ಅದಕ್ಕೆಲ್ಲಾ ಕಾರಣ ಏನೆಂದರೆ ಮೃತ್ಯು ದೇವತೆಯಾದ ಯಮಧರ್ಮರಾಜ ಈ ದೇವಾಲಯದಲ್ಲಿ ನೆಲೆಸಿರುವುದು.
ಜಗತ್ತಿನಲ್ಲಿ ಯಮಧರ್ಮರಾಜನ ದೇವಾಲಯವಿರುವುದು ಇದೊಂದೇ ಎಂದು ಹೇಳಲಾಗುತ್ತದೆ. ಮೂಲಗಳ ಪ್ರಕಾರ ಈ ದೇವಸ್ಥಾನಗಳ ಕುರಿತು ಹಲವು ವಿಷಯಗಳು ಕುತುಹಲಭರಿತವಾಗಿದ್ದು ಇದು ಅಲ್ಲಿನ ಸ್ಥಳೀಯ ವಲಯದಲ್ಲಿ ಪ್ರಚಲಿತದಲ್ಲಿದೆ. ಮೂಲಗಳ ಪ್ರಕಾರ ಇಲ್ಲಿ ಯಮಧರ್ಮರಾಜನು ತನ್ನ ಮಂತ್ರಿಯಾದ ಚಿತ್ರಗುಪ್ತನೊಂದಿಗೆ ನೆಲೆಸಿದ್ದು, ಯಾವುದೇ ಒಬ್ಬ ವ್ಯಕ್ತಿ, ಇಲ್ಲವೇ ಜೀವಿಯ ಮರಣ ಹೊಂದಿದ ನಂತರ ಯಮ ಕಿಂಕರರು ಆ ಆತ್ಮವನ್ನು ಮೊದಲು ಈ ದೇವಾಲಯಕ್ಕೆ ಕರೆದೊಯ್ಯುತ್ತಾರೆ ಅಲ್ಲೇ ಪಕ್ಕದಲ್ಲಿರುವ ಕೋಣೆಯಲ್ಲಿ ಚಿತ್ರಗುಪ್ತನಿದ್ದು ಆತ್ಮದ ಪಾಪ ಪುಣ್ಯದ ಕರ್ಮಗಳನ್ನು ವಿವರವಾಗಿ ತಿಳಿಸುತ್ತಾನಂತೆ. ತದ ನಂತರ ಕಿಂಕರರು ಪಕ್ಕದಲ್ಲಿರುವ ಯಮಧರ್ಮರಾಜನ ಮುಂದೆ ವ್ಯಕ್ತಿಯನ್ನು ಕರೆದೊಯ್ಯುತ್ತಾರೆ. ಅದನ್ನು ಅಲ್ಲಿಯ ಸ್ಥಳೀಯರು ಯಮಧರ್ಮರಾಜನ ಕಚೇರಿ ಎಂದು ಕರೆಯುತ್ತಾರೆ. ಹಾಗೇ ಹಾಜರುಪಡಿಸಿದ ಆತ್ಮವನ್ನು ಆತ್ಮದ ಕರ್ಮಕ್ಕೆ ಅನುಗುಣವಾಗಿ ಯಮರಾಜನು ತೀರ್ಪುನ್ನು ನೀಡುತ್ತಾನೆ ಎನ್ನುವುದು ಇಲ್ಲಿನ ದೇವಾಲಯದ ಪ್ರತೀತಿ.
ಅಷ್ಟೇ ಅಲ್ಲ ಈ ಮಂದಿರದಲ್ಲಿ ನಾಲ್ಕು ಅದೃಶ್ಯ ಬಾಗಿಲುಗಳಿದ್ದು ಅವು ಚಿನ್ನ, ಬೆಳ್ಳಿ, ತಾಮ್ರ ಮತ್ತು ಕಬ್ಬಿಣಗಳಿಂದ ಮಾಡಲ್ಪಟ್ಟಿದೆ ಹಾಗೂ ಯಮರಾಜ ತನ್ನ ತೀರ್ಪನ್ನು ನೀಡಿದ ನಂತರ ಯಮ ಕಿಂಕರರು ಈ ದ್ವಾರದ ಮುಲಕ ಸ್ವರ್ಗ ಅಥವಾ ನರಕಕ್ಕೆ ಕರೆದೊಯ್ಯುತ್ತಾರೆ ಎಂಬುದು ಸ್ಥಳೀಯ ವಲಯದಲ್ಲಿರುವ ನಂಬಿಕೆ. ಗರುಡ ಪುರಾಣದಲ್ಲು ಕೂಡಾ ಯಮರಾಜನ ಆಸ್ಥಾನದಲ್ಲಿ ನಾಲ್ಕು ದಿಕ್ಕುಗಳಲ್ಲಿ 4 ದ್ವಾರಗಳಿರುವುದರ ಕುರಿತು ಉಲ್ಲೇಖವಾಗಿರುವ ಕಾರಣ ಇಂತಹ ನಂಬಿಕೆಗಳು ನಮ್ಮನ್ನು ಚಕಿತಗೊಳಿಸುತ್ತದೆ.
 
ಅಲ್ಲದೇ ಇಲ್ಲಿನ ದೇವಸ್ಥಾನವು ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ನೋಡಲು ನಯನಮನೋಹರವಾಗಿದೆ ಸುತ್ತಲು ಇರುವ ಹಿಮದ ರಾಶಿ ಒಂದಡೆಯಾದರೆ ಸಮೀಪದಲ್ಲಿರುವ ಬ್ರಮ್ಮಿಣಿ ಮಠ ದೇವಾಲಯ, ಮಣಿ ಮಹೇಶ್ ದೇವಾಲಯ, ಮತ್ತು ನರಸಿಂಹ ದೇವಾಲಯ ಇಲ್ಲಿನ ಮತ್ತೊಂದು ಆಕರ್ಷಣೆ ಎಂದೇ ಹೇಳಬಹುದು. ಇಲ್ಲಿನ ಎಲ್ಲಾ ದೇವಾಲಯಗಳ ನಿರ್ಮಾಣ ತುಂಬಾ ಹಳೆಯದಾಗಿದ್ದು, ನೋಡಲು ತುಂಬಾ ಆಕರ್ಷಣಿಯವಾಗಿದೆ
 
ಇದು ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರವಾಸಿ ತಾಣವಾಗಿ ಕೂಡಾ ಮಾರ್ಪಟ್ಟಿದೆ. ಅಲ್ಲದೇ ಇಲ್ಲಿ ಯಮಧರ್ಮರಾಜನ ದೇವಾಲಯ ಇಲ್ಲಿನ ಮುಖ್ಯ ಆಕರ್ಷಣೆ ಆಗಿರುವುದರಿಂದ ಅದನ್ನು ನೋಡಲು ಲಕ್ಷಾಂತರ ಪ್ರವಾಸಿಗರು ಬರುತ್ತಾರೆ ಅನ್ನುವುದು ಇನ್ನೊಂದು ವಿಶೇಷ. ನಿಮಗೂ ಒಂದು ಬಾರಿ ಯಮಧರ್ಮರಾಜನ ದರ್ಶನ ಪಡೆದು ಪಾವನವಾಗಬೇಕು ಎಂದು ಅಂದುಕೊಂಡಲ್ಲಿ ಒಮ್ಮೆ ನೀವು ಸಹ ಭೇಟಿ ನೀಡಬಹುದು.ಇದರಲ್ಲಿ ಇನ್ನಷ್ಟು ಓದಿ :