ಬೆಂಗಳೂರು: ಮಹದಾಯಿ ಸಮಸ್ಯೆಯನ್ನು ನ್ಯಾಯಾಧಿಕರಣದ ಹೊರಗೆ ಇತ್ಯರ್ಥ ಪಡಿಸಿಕೊಳ್ಳಲು ಇಂದು ಮುಂಬೈನಲ್ಲಿ ನಡೆಯಬೇಕಿದ್ದ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿ ಸಭೆ ಮುಂದೂಡಿದ್ದು, ರೈತ ಹೋರಾಟಗಾರರಿಗೆ ಹಾಗೂ ಮಲಪ್ರಭೆಯ ಅಚ್ಚುಕಟ್ಟು ಪ್ರದೇಶದ ವಾಸಿಗಳ ಆಕ್ರೋಶಕ್ಕೆ ಕಾರಣವಾಗಿರಬಹುದು. ಆದರೆ, ಅದರ ಲಾಭದ ಮೂಟೆ ಮಾತ್ರ ಅಕ್ಷರಶಃ ಜೆಡಿಎಸ್ ಮನೆ ಬಾಗಿಲಿಗೆ ಬಂದು ಬಿದ್ದಿದೆ. ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ಬೆಳವಣಿಗೆಯನ್ನು ವಿಶ್ಲೇಷಿಸುವುದಾದರೆ, ಜೆಡಿಎಸ್ ಗೆ ಉತ್ತರ