ಕೊರೊನಾ ಎರಡನೇ ಅಲೆಯ ಅಬ್ಬರ ಹಾಗೂ ಲಾಕೌಡನ್ ನಿಂದ ಭಕ್ತರ ಪ್ರವೇಶ ನಿಷೇಧ ಹಿನ್ನೆಲೆಯಲ್ಲಿ ನಂಜುಂಡನ ಹುಂಡಿ ಹಣ ಸಂಗ್ರಹದಲ್ಲಿ ಭಾರಿ ಇಳಿಕೆಯಾಗಿದ್ದು, 2 ತಿಂಗಳ ಅವಧಿಗೆ ಕೇವಲ 56 ಲಕ್ಷ 11 ಸಾವಿರ 966 ರೂ. ಮಾತ್ರ ಸಂಗ್ರಹವಾಗಿದೆ. ತಿಂಗಳಿಗೆ ಕೋಟಿಗಟ್ಟಲೆ ಆದಾಯ ಗಳಿಸುತ್ತಿದ್ದ ನಂಜುಂಡನ ಹುಂಡಿಯಲ್ಲಿ ಬಿದ್ದ ಹಣದ ಎಣಿಕೆ ಕಾರ್ಯ ಶುಕ್ರವಾರ ನಡೆದಿದ್ದು, ಶೇ.50ಕ್ಕಿಂತ ಕಡಿಮೆ ಆದಾಯ ಗಳಿಸಿದೆ. ಹುಂಡಿಯಲ್ಲಿ 5 ವರ್ಷಗಳ ಹಿಂದೆ ಕೇಂದ್ರ