ಪ್ರಧಾನಮಂತ್ರಿ ನರೇಂದ್ರಮೋದಿ ಒಬ್ಬರಿಂದ ದೇಶ ಬದಲಾವಣೆ ಹೊಂದಲು ಸಾಧ್ಯವಿಲ್ಲ. ಜನರೂ ಬದಲಾಗಬೇಕು ಎಂದು ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿ, ರಾಷ್ಟ್ರೀಯ ಪಕ್ಷಗಳಿಂದ ಆಹ್ವಾನ ಬಂದಿದೆ. ಆದರೆ, ಅವೆಲ್ಲವನ್ನು ಬಿಟ್ಟು ನನ್ನ ಕನಸನ್ನು ಹೊತ್ತು ಹೊರಟಿದ್ದೇನೆ ಎಂದಿದ್ದಾರೆ.50 ಸಾವಿರ ಮೇಲ್ ಗಳು ಬಂದಿದ್ದು, 30 ಸಾವಿರ ಕ್ರಿಯಾಶೀಲ ಜನರು ಜೊತೆಯಲ್ಲಿದ್ದಾರೆ. ಶಾಸಕ ಸ್ಥಾನ ಗೆಲ್ಲಲು 50 ಕೋಟಿ ಹಣ ಬೇಕು. ಆದರೆ, ಅದು ನನ್ನಬಳಿ ಇಲ್ಲ.