ಕಲಬರ್ಗಿ: ಪದ್ಮಾವತಿ ಸಿನಿಮಾ ಬಿಡುಗಡೆ ವಿರೋಧಿಸಿ ರಜಪೂತ ಸಮಾಜದವರು ನಡೆಸಿದ ಪ್ರತಿಭಟನೆಯಲ್ಲಿ ತಲವಾರ ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.ನಂದಕಿಶೋರ ಚವಾಣ, ಕರಣಸಿಂಗ ಗೆಹವಾರ, ಕಾರ್ತಿಕಸಿಂಗ, ನರೇಶ ದುಬೆ, ಕರಣಸಿಂಗ ಹಜಾರೆ, ಗೌರವ ಠಾಕೂರ, ಆಕಾಶ ಸಿಂಗ ಹಾಗೂ ಆಕಾಶ ಠಾಕೂರ ಅವರನ್ನು ಬಂಧಿಸಲಾಗಿದೆ.ಅನುಮತಿ ಪಡೆದುಕೊಳ್ಳದೆ ಪ್ರತಿಭಟನೆ ನಡೆಸಲಾಗಿದ್ದು, ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಜನರಿಗೆ ಭಯ ಹುಟ್ಟಿಸಿದ್ದಾರೆ. ಆದ್ದರಿಂದ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು