ಕೊಡಗು ಜಿಲ್ಲೆಯನ್ನು ದಕ್ಷಿಣ ಕಾಶ್ಮೀರ, ಭಾರತದ ಸ್ಕಾಟ್ಲ್ಯಾಂಡ್ ಎಂದೆಲ್ಲಾ ಕರೆಯುತ್ತಾರೆ. ಅದೆಲ್ಲವನ್ನೂ ಸಾಕ್ಷೀಕರಿಸುವುದು ಇಲ್ಲಿನ ಜಲಧಾರೆಗಳು. ಕೂರ್ಗ್ ಅಂದ್ರೆ ಪ್ರವಾಸಿ ತಾಣಗಳ ತವರೂರು. ಇಲ್ಲಿನ ಪ್ರಾಕೃತಿಕ ಸಹಜ ಸೌಂದರ್ಯವನ್ನು ಸವಿಯಲು ಸಾವಿರಾರು ಜನರು ನಾಲ್ಕೈದು ದಿನಗಳು ಬಿಡುವು ಮಾಡಿಕೊಂಡು ಬರುತ್ತಾರೆ. ಅದರಲ್ಲೂ ಮಳೆಗಾಲ ಆರಂಭವಾಯಿತ್ತೆಂದರೆ, ಪ್ರತಿ ಬೆಟ್ಟಗುಡ್ಡದ ತಪ್ಪಲಿನಲ್ಲೂ ಜಲಕನ್ಯೆಯರು ಮೈದಳೆದು ವೈಯ್ಯಾರ ತೋರುತ್ತಾರೆ.ಜಿಲ್ಲೆಯಲ್ಲಿ ಸುರಿಯುವ ಜಿಟಿಜಿಟಿ ಮಳೆಯಲ್ಲಿ ಹಸಿರನ್ನೇ ಹೊದ್ದು ಮಲಗಿದ ಪರಿಸರದಲ್ಲಿ ಹುಟ್ಟಿ ಹಸಿರ ನಡುವಿನಿಂದಲೇ ಹಾಲ್ನೊರೆಯಂತೆ