ಮಂಗಳೂರು ನಗರದ ಪಣಂಬೂರು ಪ್ರದೇಶದ ಜನರು ನಡೆದಾಡಲು ರಸ್ತೆ ಇಲ್ಲದೆ ರೈಲಿನಡಿಯೇ ನುಸುಳಿ ಓಡಾಡಬೇಕು ಎಂದರೆ ನೀವು ನಂಬಲೇಬೇಕು. ಹೌದು. ಸ್ಮಾರ್ಟ್ ಸಿಟಿಯಾಗಲಿರುವ ಮಂಗಳೂರಿನ ಈ ಪ್ರದೇಶದ ಜನರ ಪಾಡು ಹೇಳಿ ತೀರುವಂತಹದ್ದಲ್ಲ. ಪಣಂಬೂರು ಎನ್ಎಂಪಿಟಿಗೆ ಅದಿರು ಕೊಂಡೊಯ್ಯುವ ರೈಲು ಬಂದು ಈ ರಸ್ತೆಗಡ್ಡವಾಗಿ ನಿಂತಲ್ಲಿ ಈ ಪ್ರದೇಶದ ಜನರು ಮುಖ್ಯರಸ್ತೆಗೆ ಬರಬೇಕಾದಲ್ಲಿ ರೈಲಿನಡಿ ನುಸುಳಿಯೇ ಬರಬೇಕು. ಅದಿರು ಸರಬರಾಜು ಮಾಡಲು ಬರುವ ರೈಲು ದಿನಗಟ್ಟಲೆ, ಎರಡು ಮೂರು ದಿನಗಳ