ಮುಂಬೈ: ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಇಟ್ಟು ಪ್ರಾರ್ಥನೆ ಮಾಡಿ ತೊಂದರೆ ಕೊಡಬಾರದು ಎಂದು ಟ್ವೀಟ್ ಮಾಡಿದ್ದ ಖ್ಯಾತ ಗಾಯಕ ಸೋನು ನಿಗಂಗೆ ಮುಸ್ಲಿಂ ಧರ್ಮಗುರುಗಳಿಂದ ಎಚ್ಚರಿಕೆ ಬಂದಿತ್ತು. ಇದೀಗ ಸೋನು ಬೆಂಬಲಿಸಿ ಮಾತನಾಡಿದ್ದಕ್ಕೆ ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ. ಮಧ್ಯಪ್ರದೇಶದ ಉಜ್ಜೈನ್ ಎಂಬಲ್ಲಿ ಸೋನು ಟ್ವೀಟ್ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಾಗ, ಎರಡು ಗುಂಪುಗಳ ನಡುವೆ ವಾದ ವಿವಾದ ತಾರಕಕ್ಕೇರಿ ಫೈಝಾನ್ ಖಾನ್ ಎಂಬಾತ ಶಿವಂ ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ