9 ತಿಂಗಳ ಕೂಸಿನ ಮೇಲೆ ಅತ್ಯಾಚಾರ!

ಉತ್ತರ ಪ್ರದೇಶ| Ramya kosira| Last Modified ಸೋಮವಾರ, 19 ಜುಲೈ 2021 (10:26 IST)
ಬುಲಂದ್ಶಹರ್(ಜು. 18) : ಘೋರ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ.  ಉತ್ತರ ಪ್ರದೇಶದ ಬುಲಂದ್ಶಾರ್ನಲ್ಲಿ ವ್ಯಕ್ತಿಯೊಬ್ಬ 9 ತಿಂಗಳ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
* ಉತ್ತರ ಪ್ರದೇಶದಿಂದ ಘೋರ ಘಟನೆ ವರದಿ
*  9 ತಿಂಗಳ ಹೆಣ್ಣು ಮಗುವಿನ ಅತ್ಯಾಚಾರ
* ಆಟ ಆಡುವ ನೆಪದಲ್ಲಿ ಬಾಲಕಿಯನ್ನು ಕರೆದುಕೊಂಡು ಹೋದ
* ಆರೋಪಿ ಪತ್ತೆಗೆ ಬಲೆ ಬೀಸಿರುವ ಪೊಲೀಸರು
 
ಮಗುವಿನ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಲಂದ್ಶಹರ್ನ ಖುರ್ಜಾ ದೇಹತ್ ಪ್ರದೇಶದಲ್ಲಿ  ದಾರುಣ ಘಟನೆ ನಡೆದಿದೆ.  ಆಟವಾಡುವ ನೆಪದಲ್ಲಿ ತನ್ನ ಮನೆಗೆ ಕರೆದೊಯ್ದು ಎಸಗಿದ್ದಾನೆ.
ಆಸಿಡ್ ಎರಚಿದ್ದ ಕಿರಾತಕರಿಗೆ ಕೊನೆಗೂ ಜೀವಾವಧಿ ಶಿಕ್ಷೆ
ಪಕ್ಕದ ಮನೆಯಲ್ಲೇ ವಾಸವಿದ್ದ ಕಿರಾತಕ ನಂಬಿಸಿ ಕರೆದುಕೊಂಡು  ಹೋಗಿದ್ದಾನೆ. ಮಗು ರಕ್ತದ ಮಡುವಿನಲ್ಲಿ ಬಿದ್ದುಕೊಂಡಿತ್ತು.  ಮಾಹಿತಿ ತಿಳಿದು ಬಾಲಕಿಯ ಕುಟುಂಬದವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದು ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವನ್ನು  ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.
 
 
ಇದರಲ್ಲಿ ಇನ್ನಷ್ಟು ಓದಿ :