ಹಿಂದು ಪುರಾಣದಲ್ಲಿ ಮನುಷ್ಯನ ಜನನದ ಕಾಲದಿಂದ ಹಿಡಿದು ಮರಣದ ಕಾಲದವರೆಗೆ ಏನು ಬೇಕು ಯಾವ ಕರ್ಮಗಳನ್ನು ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ಬರೆದಿರುವುದು ಎಲ್ಲರಿಗೂ ತಿಳಿದೆ ಇದೆ, ಆದ್ರೆ ಅದರಲ್ಲೂ ನಮಗೆ ತುಂಬಾ ಕೂತುಹಲಕಾರಿಯಾಗಿರುವುದು ಪುನರ್ಜನ್ಮ ಎಂಬ ವಿಷಯ ವಸ್ತು. ಈ ಪುನರ್ಜನ್ಮ ಎಂದರೇನು ಮತ್ತು ಇದು ನಿಜವಾ ಅಂಥ ಕೆಲವರು ಕೇಳಿದರೆ ಇನ್ನೂ ಕೆಲವರು ಅವೆಲ್ಲಾ ಸುಳ್ಳು ಸತ್ತ ಮೇಲೆ ಎಲ್ಲವೂ ನಶ್ವರ ಎಂದು ಹೇಳುವ ಕೆಲವು ವರ್ಗದ ಜನರು ಇನ್ನೊಂದಡೆ.