ಅಂತಾರಾಷ್ಟ್ರೀಯ ಯುವ ದಿನ 2021: ಈ ವರ್ಷದ ಯುವ ದಿನದ ಥೀಮ್ ಅನ್ನು ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸುವುದು: ಮಾನವ ಮತ್ತು ಗ್ರಹ ಆರೋಗ್ಯಕ್ಕಾಗಿ ಯುವ ನಾವೀನ್ಯತೆ ಎಂದು ನಿರ್ಧರಿಸಲಾಗಿದೆ. ಪ್ರಪಂಚದೆಲ್ಲೆಡೆ ದುಡಿಯುವ ಕೈಗಳಲ್ಲಿ ಪ್ರಮುಖವಾಗಿ ಯುವಕರಿಗೆ ಆದ್ಯತೆ ನೀಡಲಾಗುತ್ತದೆ. ಈ ಹಿನ್ನೆಲೆ ಯುವಕರ ಸಮಸ್ಯೆಗಳನ್ನು ಸ್ಥಳೀಯ ಸರ್ಕಾರಗಳು, ಇತರರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇದು ಸೇರಿ ಹಲವು ಪ್ರಮುಖ ಉದ್ದೇಶಗಳನ್ನಿಟ್ಟುಕೊಂಡು ಪ್ರತಿ ವರ್ಷ ಆಗಸ್ಟ್ 12ರಂದು ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.