ತಮಿಳುನಾಡಿನ ಅಮ್ಮ ಕ್ಯಾಂಟಿನ್, ರಾಜ್ಯದಲ್ಲಿನ ಇಂದಿರಾ ಕ್ಯಾಂಟಿನ್ ಹಾಗೂ ಅಪ್ಪ ಕ್ಯಾಂಟಿನ್ ಮಾದರಿಯಲ್ಲಿ ಮಂಡ್ಯದಲ್ಲಿ ಚಿತ್ರನಟಿ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರ ಹೆಸರಿನಲ್ಲಿ ರಮ್ಯಾ ಕ್ಯಾಂಟಿನ್ ಆರಂಭವಾಗಿದೆ. ರಮ್ಯಾ ಕ್ಯಾಂಟಿನ್ನಲ್ಲಿ ಇಡ್ಲಿ, ವಡೆ, ದೋಸೆ, ಮುದ್ದೆ, ಅನ್ನ ಸಾಂಬಾರ್, ಸೇರಿದಂತೆ ಅನೇಕ ಬಗೆಯ ತರಹೇವಾರಿ ತಿಂಡಿಗಳು ದೊರೆಯುತ್ತವೆ. ಕೇವಲ ಹತ್ತು ರೂಪಾಯಿಗಳಿಗೆ ಕ್ಯಾಂಟಿನ್ನಲ್ಲಿ ತಿಂಡಿಗಳು ಲಭ್ಯವಿದ್ದು, ಪಾರ್ಸಲ್ ವ್ಯವಸ್ಥೆಯೂ ಒದಗಿಸಲಾಗಿದೆ. ರಮ್ಯಾ ಅವರ ಅಭಿಮಾನಿಗಳು ಕ್ಯಾಂಟಿನ್