ಲಖನೌ(ಜು.18): ಸಹಾಯಕ ಸ್ಟೇಷನ್ ಮಾಸ್ಟರ್ ಒಬ್ಬರು ಕುಡಿತದ ಅಮಲಿನಲ್ಲಿ ನಿದ್ದೆಗೆ ಜಾರಿದ ಪರಿಣಾಮ ಒಂದುವರೆ ಗಂಟೆಗಳ ಕಾಲ ರೈಲು ಸೇವೆಗಳು ವ್ಯತ್ಯಯವಾದ ಘಟನೆ ದೆಹಲಿ-ಹೌರಾ ರೈಲು ಮಾರ್ಗದಲ್ಲಿ ಬುಧವಾರ ನಡೆದಿದೆ. ಇದರಿಂದಾಗಿ ವೈಶಾಲಿ ಎಕ್ಸ್ಪ್ರೆಸ್, ಸಂಗಮ್ ಎಕ್ಸ್ಪ್ರೆಸ್ ಫರಕ್ಕಾ ಮತ್ತು ಮಗಧ ಎಕ್ಸ್ಪ್ರೆಸ್ ಮತ್ತು ಇನ್ನಿತರ ಸರಕು ಸಾಗಣೆಯ ರೈಲುಗಳು ಹಲವು ರೈಲ್ವೆ ನಿಲ್ದಾಣಗಳಲ್ಲೇ ಒಂದುವರೆ ತಾಸುಗಳ ಕಾಲ ನಿಲ್ಲಬೇಕಾಯಿತು.