ಸ್ಥಳೀಯ, ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಿ

ಬೆಂಗಳೂರು| Krishnaveni K| Last Modified ಸೋಮವಾರ, 20 ಜುಲೈ 2020 (09:33 IST)
ಬೆಂಗಳೂರು: ಕೊರೋನಾ ಎಂಬುದು ಸಣ್ಣ ಸಣ್ಣ ಉದ್ಯಮಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ಎಷ್ಟೋ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹವರಿಗೆ ನೆರವಾಗಲು ನಮ್ಮ ಸುತ್ತಮುತ್ತಲಿರುವ ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಬೇಕಿದೆ.
 

ಆದಷ್ಟು ಸಣ್ಣ ಉದ್ಯಮಗಳಿಂದ, ಉದ್ಯಮಗಳಿಂದ ನಮ್ಮ ಖರೀದಿ ವ್ಯವಹಾರ ಮಾಡುವುದು, ಅದನ್ನು ಇತರರಿಗೆ ಶೇರ್ ಮಾಡಿಕೊಳ್ಳುವುದು, ಒಂದು ಉತ್ತಮ ಅಭಿಪ್ರಾಯ ಹೇಳುವುದು ಇಷ್ಟು ಮಾಡಿದರೂ ಸಾಕು. ಇದರಿಂದ ನಮ್ಮ ಸುತ್ತಲಿರುವ ನಮ್ಮದೇ ಜನರ ಬದುಕು ಹಸನಾಗುತ್ತದೆ.
 
ಈಗಾಗಲೇ ಈ ಬಗ್ಗೆ ಕನ್ನಡ ಕಿರುತೆರೆ ಕಲಾವಿದರು ಅಭಿಯಾನವನ್ನೇ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಿ ಎಂದು ಅಭಿಯಾನಗಳು ಶುರುವಾಗಿದೆ. ಈ ಮೂಲಕ ಕೊರೋನಾ ಬಳಿಕ ಬದುಕು ಕಟ್ಟಿಕೊಳ್ಳಲು ನಮ್ಮವರಿಗೆ ಬೆಂಬಲ ನೀಡುತ್ತಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :