ಮದುವೆ ಮಾಡಿಕೊಳ್ಳುವಂತೆ ಕೇಳಿದ್ದಕ್ಕೆ ಗರ್ಭಿಣಿಯನ್ನು ಪ್ರಿಯತಮ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಡೋನ್ ಮಂಡಲದ ಯರಗುಂಟಾದಲ್ಲಿ ಈ ಘಟನೆ ನವೆಂಬರ್ 20ರಂದು ನಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿರುವ ರಮಿಜಬಿ ಅವರ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪ್ರಕರಣ ಬೆಳಕು ಕಂಡಿದೆ. ಪತಿಯೊಂದಿಗೆ ವಿಚ್ಚೇಧನ ಪಡೆದಿರುವ ರಮಿಜಬಿ ತನ್ನ ಮಗನ ಜೊತೆ ಪೋಷಕರೊಂದಿಗೆ ವಾಸವಿದ್ದಾಳೆ. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಮಿಜಬಿಗೆ ಮಾಲೀಕನ ಮಗನೊಂದಿಗೆ ಪ್ರೇಮಾಂಕುರವಾಗಿ