ಬೆಂಗಳೂರು: ಹಣದ ವಿಚಾರಕ್ಕೆ ಲಾಡ್ಜ್ನಲ್ಲಿ ನಡೆದ ಗಲಾಟೆಯಲ್ಲಿ ಇಬ್ಬರು ತೃತೀಯ ಲಿಂಗಿಗಳು ಹಾಗೂ ಯುವಕ ಪರಸ್ಪರ ಹೊಡೆದಾಡಿಕೊಂಡು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಡಲಪಾಳ್ಯ ನಿವಾಸಿಗಳಾದ ಸಂಜನಾ(28) ಮತ್ತು ಅರ್ಚನಾ(30) ಗಾಯಗೊಂಡ ತೃತೀಯ ಲಿಂಗಿಗಳು. ಕೋಲ್ಕತ್ತಾ ಮೂಲದ ಅಂಕಿತ್ ಕುಮಾರ್(28) ಗಾಯಗೊಂಡವ. ಮೂವರು ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೃತೀಯ