ದೆಹಲಿ: ಹೊಸದಾಗಿ ಮೋದಿಯವರ 2.0 ಸಂಪುಟ ಸೇರಿರುವ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಗುರುವಾರದಂದು ಸುಮಾರು 23 ಸಾವಿರ ಕೋಟಿ ಮೊತ್ತದ ತುರ್ತು ಪ್ಯಾಕೇಜ್ ಘೋಷಣೆ ಮಾಡಿದರು. ನಮ್ಮ ಸರ್ಕಾರವು ಒಗ್ಗೂಡಿ ಸಮಸ್ಯೆಯ ವಿರುದ್ದ ಹೋರಾಡುವುದರಲ್ಲಿ ನಂಬಿಕೆ ಇಟ್ಟಿದ್ದು ರಾಜ್ಯಗಳ ಜೊತೆ ಒಗ್ಗೂಡಿ ಈ ಸಮಸ್ಯೆ ಬಗೆಹರಿಸಲಿದ್ದೇವೆ ಎಂದರು. 9 ತಿಂಗಳ ಸಮಯದಲ್ಲಿ ನಾವು ಆದಷ್ಟು ತುರ್ತಾಗಿ ಕೆಲಸ ಮಾಡುತ್ತೇವೆ. ನಮ್ಮ ಮುಂದಿರುವ ಸವಾಲು ಎಂದರೆ ಅಗತ್ಯವಿರುವ ರಾಜ್ಯಗಳಿಗೆ ಕೈಲಾದಷ್ಟು