ಸುಷ್ಮಾ ವಿಕ್ರಮ್ ನವೆಂಬರ್ ತಿಂಗಳು ಬಂತೆಂದರೆ ಸಾಕು ಸರ್ಕಾರ, ಕನ್ನಡಪರ ಸಂಘಟನೆಗಳು ಎಲ್ಲವೂ ಚುರುಕಾಗಿ ರಾಜ್ಯೋತ್ಸವ ಸಭೆ, ಸಮಾರಂಭಗಳಿಗೆ ತಯಾರಾಗುತ್ತವೆ. ಹಾಗೆಯೇ ಆಡಳಿತ ಭಾಷೆ ಕನ್ನಡವಾಗಬೇಕು ಎನ್ನುವ ಕೂಗು ಮುಗಿಲು ಮುಟ್ಟಿ ಸರ್ಕಾರಿ ಕಛೇರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಪ್ರಾರಂಭವಾಗುತ್ತದೆ. ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎನ್ನುವ ಕೂಗು ತಾರಕಕ್ಕೇರುತ್ತದೆ. ಆನೇನೇ ಹೋಯ್ತು, ಆನೆ ಬಾಲಕ್ಕೆ ಒದ್ದಾಡಿದ್ರು ಅನ್ನೋ ಹಾಗೆ, ಆಡಳಿತ ಭಾಷೆಗೇನೆ ಹೆಚ್ಚು ಒತ್ತು ಕೊಡುತ್ತಾ ಬರುತ್ತಿದ್ದಾರೆ.