ಬೆಂಗಳೂರು (ಜು.14): ಕರ್ನಾಟಕ ಪೊಲೀಸ್ ಪಡೆ ಅತ್ಯಂತ ವಿಶ್ವಾಸಾರ್ಹ ಮತ್ತು ದಕ್ಷ ಪೊಲೀಸ್ ಪಡೆ ಎಂದು ಇಡೀ ದೇಶದಲ್ಲಿ ಹೆಸರಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಧಾನಸೌಧ ಮುಂದೆ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಪುನಶ್ಚೇತನಕ್ಕಾಗಿ 50 ಬಸ್ಗಳಿಗೆ ಚಾಲನೆ, ‘ಪೊಲೀಸ್ ಆರೋಗ್ಯ ಭಾಗ್ಯ ಪುನಶ್ಚೇತನ ಯೋಜನೆ’, ಮಕ್ಕಳ ಶಿಕ್ಷಣಕ್ಕೆ ‘ಪೊಲೀಸ್ ವಿದ್ಯಾನಿಧಿ’ ಯೋಜನೆಗೆ ಚಾಲನೆ ನೀಡಿದರು. ಇದೇ ವೇಳೆ ‘ಸೀನ್ ಆಫ್ ಕ್ರೈಂ ಆಫೀಸರ್ಸ್’ ಹುದ್ದೆಗೆ