ಬೆಂಗಳೂರು: ಉಪ್ಪಿಟ್ಟು ಎಂದ ತಕ್ಷಣ ಕೆಲವರು ಮೂಗು ಮುರಿಯುತ್ತಾರೆ. ಇನ್ನು ಕೆಲವರಿಗೆ ಬಾಯಲ್ಲಿ ನೀರು. ಹಲವರು ಜೀವನ ಸಾಗಿಸಲು ಉಪ್ಪಿಟ್ಟೆ ಸರ್ವಸ್ವ.. ಈಗ ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಘೋಷಣೆ ಮಾಡಬೇಕು ಎಂಬ ಚರ್ಚೆಗಳು ಆಂಭವಾಗಿವೆ. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಚರ್ಚೆಗೆ ಮೂಲ ಕಾರಣ ಇತ್ತೀಚೆಗೆ ಪತ್ರಿಕೆಯೊಂದು ತಮಿಳು