ರಾಯಚೂರು ಜಿಲ್ಲೆಯ ಮುಂಗಾರು ಮಳೆ ಪರಿಣಾಮದಿಂದ ಕೆಲ ಗ್ರಾಮೀಣ ಪ್ರದೇಶಗಳ ರಸ್ತೆಗಳು ಹದ್ದಗೆಟ್ಟಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದರ ನಡುವೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣ ಹತ್ತಿರ ಬರುವ ಹೂನೂರು ಗ್ರಾಮ ಪಂಚಾಯತಿ ವ್ಯಾಪ್ತಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ತೆರಳುವ ರಸ್ತೆ ಸ್ವಂತ ಹಣದಿಂದ ರಿಪೇರಿ ಮಾಡಿಕೊಂಡಿದ್ದಾರೆ.