ಶಾಲಾರಂಭ ಯಾವಾಗ? : ಶೀಘ್ರ ನಿರ್ಧಾರ

Bangalore| Ramya kosira| Last Modified ಬುಧವಾರ, 21 ಜುಲೈ 2021 (08:55 IST)
 ಬೆಂಗಳೂರು (ಜು.21): ರಾಜ್ಯದಲ್ಲಿ ಶಾಲೆ  ಮತ್ತು  ಪದವಿ ತರಗತಿಗಳನ್ನು ಭೌತಿಕವಾಗಿ ಆರಂಭಿಸುವ  ಸಂಬಂಧ ಜುಲೈ ಮಾಸಾಂತ್ಯದ ವೇಳೆ ನಿರ್ಧಾರ  ಕೈಗೊಳ್ಳುವುದಾಗಿ ಪ್ರಾಥಮಿಕ  ಮತ್ತು ಪ್ರೌಢ ಶಿಕ್ಷಣ  ಸಚಿವ  ಸುರೇಶ್ ಕುಮಾರ್  ತಿಳಿಸಿದ್ದಾರೆ.

 
•ರಾಜ್ಯದಲ್ಲಿ ಶಾಲೆ  ಮತ್ತು  ಪದವಿ ತರಗತಿಗಳನ್ನು ಭೌತಿಕವಾಗಿ ಆರಂಭಿಸುವ  ಸಂಬಂಧ ಜುಲೈ ಮಾಸಾಂತ್ಯದ ವೇಳೆ ನಿರ್ಧಾರ
•ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ
ಶಾಲೆ ಪಿಯು ಕಾಲೇಜುಗಳನ್ನು ಯಾವಾಗಿನಿಂದ ಆರಂಭಿಸಬೇಕೆಂಬ ಬಗ್ಗೆ ವರದಿ ನೀಡಲು ರಚಿಸಿರುವ ಕಾರ್ಯಪಡೆ ಈಗಾಗಲೇ 2 ಹಂತದ ಸಭೆ ನಡೆಸಿದೆ. ಮತ್ತೊಂದು ಸುತ್ತಿನ ಸಬೆ ನಡೆಸಿ ವರದಿಯನ್ನು ನಿಡಲಿದೆ.
ಹೈಸ್ಕೂಲ್ಗೆ ಮುನ್ನ ಪ್ರಾಥಮಿಕ ಶಾಲೆ ಆರಂಭಿಸಿ!
ಈ ವರದಿ ಆಧರಿಸಿ ಸಿಎಂ ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕೊರೋನಾ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಮುಚ್ಚಲಾಗಿದ್ದು ಮತ್ತೆ ತೆರೆಯುವ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಲೇ ಇದ್ದು ತಜ್ಞರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
 
ಇದರಲ್ಲಿ ಇನ್ನಷ್ಟು ಓದಿ :