ಕೊರೋನಾ ಕಾಟ ಶುರುವಾಗಿ ಕಂಪನಿಗಳು ಕೆಲಸಗಾರರಿಗೆ ವರ್ಕ್ ಫ್ರಂ ಹೋಮ್ ಅವಕಾಶ ನೀಡಿದೆ. ಬಹುತೇಕ ಕಂಪನಿಗಳ ಉದ್ಯೋಗಿಗಳು ಈಗ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಜನರು ಟೆಕ್ನಾಲಜಿಗೆ ಒಗ್ಗಿಬಿಟ್ಟಿದ್ದಾರೆ. ಆಫೀಸುಗಳಲ್ಲಿ ಉದ್ಯೋಗಿಗಳ ಕೆಲಸವನ್ನು ಮಾನಿಟರ್ ಮಾಡಲು ಟೂಲ್ಸ್, ಡಾಟಾ ಎಂಟ್ರಿ ಎಪ್ಲೆಕೇಷನ್ಗಳೂ ಇದ್ದವು. ಆದರೆ ಇವುಗಳೆಲ್ಲವೂ ಆಫೀಸುಗಳಿಗಷ್ಟೇ ಸೀಮಿತವಾಗಿದ್ದವು. ಬೇರೆ ರೀತಿಯಲ್ಲಿ ಹೇಳುವುದಾದರೆ ಕಾರ್ಯಕ್ಷಮತೆಯ ವಿಶ್ಲೇಷಣೆಗಾಗಿ ಉದ್ಯೋಗಿಯ ವೃತ್ತಿಪರ ಭಾಗವನ್ನು ಮಾತ್ರ ಮೇಲ್ವಿಚಾರಣೆ ಮಾಡಬಹುದು. ಇವೆಲ್ಲವೂ ಬೋನಸ್, ಮೌಲ್ಯಮಾಪನದ