ನಾಡಹಬ್ಬಕ್ಕೆ ಚಾಲನೆ-ಸರ್ಕಾರ ದುಃಶ್ಯಾಸನ ಆಗ್ಬಾರ್ದು, ಶ್ರೀಕೃಷ್ಣನಾಗ್ಬೇಕು: ಪೇಜಾವರಶ್ರೀ

ಮೈಸೂರು, ಬುಧವಾರ, 28 ಸೆಪ್ಟಂಬರ್ 2011 (20:24 IST)

pejavara shree
PR
ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯ, ಭ್ರಷ್ಟಾಚಾರ, ದಬ್ಬಾಳಿಕೆ ವಿರುದ್ಧ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ಕರೆ ನೀಡಿರುವ ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಪಾದರು, ಸರ್ಕಾರ ಹಸಿರುಡುಗೆ ತೊಟ್ಟ ಕನ್ನಡಾಂಬೆಯ ಸೀರೆಯನ್ನು ಎಳೆಯುವ ದುಃಶ್ಯಾಸನ ಆಗಬಾರದು, ರಕ್ಷಣೆ ನೀಡಿದ ಕೃಷ್ಣನಾಗಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಅವರು ಬುಧವಾರ ಅರಮನೆ ನಗರ ಮೈಸೂರಿನಲ್ಲಿ 401ನೇ ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿದ ನಂತರ ಮಾತನಾಡಿದರು.

ತಾಯಿ ಚಾಮುಂಡೇಶ್ವರಿ ಸಮಸ್ತ ಜನರಿಗೆ ಒಳಿತನ್ನು ಮಾಡಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ. ಅದೇ ರೀತಿ ಸಮಾಜದಲ್ಲಿನ ದಬ್ಬಾಳಿಕೆ, ಶೋಷಣೆ ವಿರುದ್ಧ ಮತ್ತಷ್ಟು ಧ್ವನಿ ಎತ್ತಬೇಕಾದ ಅಗತ್ಯವಿದೆ ಎಂದರು. ಸರ್ಕಾರ ದುಃಶ್ಯಾಸನಂತಾಗದೇ ದ್ರೌಪದಿಗೆ ಅಕ್ಷಯಾಂಬರ ನೀಡಿದ ಕೃಷ್ಣನಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮೈಸೂರು, ಮಡಿಕೇರಿಗಳಲ್ಲಿ ನಡೆಯುವ ದಸರಾ ಹಬ್ಬ ಉಳಿದ ಜಿಲ್ಲೆಗಳಲ್ಲೂ ನಡೆಯಬೇಕು. ಅದಕ್ಕೆ ಅಗತ್ಯ ನೆರವು ಸರ್ಕಾರ ನೀಡಲು ಸಿದ್ದವಿದೆ ಎಂದು ಭರವಸೆ ನೀಡಿದರು. ದಸರಾ ಹಬ್ಬ ವಿಶ್ವವಿಖ್ಯಾತವಾಗಿದೆ ಅಷ್ಟೇ ಅಲ್ಲ ಸರ್ವಧರ್ಮ ಸಮನ್ವಯದೊಂದಿಗೆ ಆಚರಿಸುವ ಮೂಲಕ ಮಾದರಿಯಾಗಿರುವುದಾಗಿಯೂ ಹೇಳಿದರು.ಇದರಲ್ಲಿ ಇನ್ನಷ್ಟು ಓದಿ :  

ದಸರಾ-ನವರಾತ್ರಿ

ಮೈಸೂರು ದಸರಾ ಉತ್ಸವ : ನಿಮಗೆ ತಿಳಿದ ಮತ್ತು ತಿಳಿಯದ ಸಂಗತಿಗಳು

ಮೈಸೂರು ದಸರಾ ಬಗ್ಗೆ ನಿಮಗೆಷ್ಟು ಗೊತ್ತು? ನಿಮಗೆ ಗೊತ್ತಿರುವ ಮತ್ತು ಗೊತ್ತಿಲ್ಲದ ಮೈಸೂರು ದಸರಾ ಸಂಭ್ರಮದ ...

ಶಕ್ತಿದೇವತೆಯಿಂದ ಶಕ್ತಿ ಬೇಡುವ ಹಬ್ಬ

ಶಕ್ತಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಈ ಶಕ್ತಿಯಿಂದ ಸಂಪೂರ್ಣ ಬ್ರಹ್ಮಾಂಡವೇ ಚಲನೆಯನ್ನು ...

ನೋಡ ಬನ್ನಿ ಮೈಸೂರು ದಸರಾ...

ಮೈಸೂರು ದಸರಾ ಸಂದರ್ಭ ನಡೆಯುವ ಆಚರಣೆಗಳಲ್ಲಿಯೂ ಹತ್ತು ಹಲವು ವೈಶಿಷ್ಟ್ಯಗಳು ಇರುವುದನ್ನು ನಾವು ಕಾಣಬಹುದು. ...

ಮೈಸೂರು ದಸರಾ ಜಂಬೂ ಸವಾರಿಯ ರೂವಾರಿಗಳು

ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಬಲರಾಮನ ನೇತೃತ್ವದಲ್ಲಿ ಅರ್ಜುನ, ಮೇರಿ, ಗಜೇಂದ್ರ, ಕವಿತ, ವರಲಕ್ಷ್ಮಿ, ...