ಅಜ್ಞಾನದ ಕಾರಿರುಳು ಹೋಗಲಾಡಿಸಿ ಸುಜ್ಞಾನದ ಜ್ಯೋತಿಯನ್ನು ಮೂಡಿಸುವ ಬೆಳಕಿನ ಹಬ್ಬ, ದೀಪಗಳ ಆವಳಿಯ ಹಬ್ಬವೇ ದೀಪಾವಳಿ. ಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಸುವ ದ್ಯೋತಕವು. ಅಂದು ಎಲ್ಲರ ಮನೆಯೂ ತೈಲದೀಪಗಳಿಂದ ಬೆಳಗುತ್ತಿದ್ದರೆ, ಮನಸ್ಸುಗಳು ಕೂಡ ಉತ್ಸಾಹದಿಂದ ಬೆಳಗುತ್ತಿರುತ್ತವೆ.ಈ ಹಬ್ಬವನ್ನು ಉತ್ತರ ಭಾರತೀಯರು ಐದು ದಿನಗಳಲ್ಲಿಯೂ, ದಕ್ಷಿಣ ಭಾರತೀಯರು ಮೂರು ದಿನಗಳಲ್ಲಿಯೂ ವಿಶೇಷ ಪೂಜೆಗಳಿಂದ ಆಚರಿಸುತ್ತಾರೆ. ಒಟ್ಟಿನಲ್ಲಿ ಪ್ರಥಮ ದಿನವಾದ ಆಶ್ವಯುಜ ಬಹುಳ ತ್ರಯೋದಶಿಯಿಂದ ತೊಡಗಿ ಐದನೇ ದಿನವಾದ ಯಮದ್ವಿತೀಯವರೆಗೆ ದೀಪಾವಳಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ